ಕಾಯಕ್ಕೆ ಲಿಂಗವ ಕಟ್ಟುವಾಗ,
ಆ ಕಾಯವ ಬಾಧೆಗೆ ಹೊರಗುಮಾಡಬೇಕು.
ಮನಕ್ಕೆ ಅರಿವ ಪೇಳುವಾಗ,
ಕರಣಂಗಳ ಮರಣವ ಮಾಡಬೇಕು.
ಇದು ಕಾರಣ, ಅಂಗಕ್ಕೆ ಕ್ರೀ,
ಮನಕ್ಕೆ ಮರವೆಯಿಲ್ಲದೆ ಕೂಡಲಾಗಿ,
ಸಂಗವಾಯಿತ್ತು, ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಾ.
Art
Manuscript
Music
Courtesy:
Transliteration
Kāyakke liṅgava kaṭṭuvāga,
ā kāyava bādhege horagumāḍabēku.
Manakke ariva pēḷuvāga,
karaṇaṅgaḷa maraṇava māḍabēku.
Idu kāraṇa, aṅgakke krī,
manakke maraveyillade kūḍalāgi,
saṅgavāyittu, sagarada bom'manoḍeya
tanumana saṅgamēśvarā.