Index   ವಚನ - 37    Search  
 
ಗೋಡೆಯ ಮರೆಯಲ್ಲಿ ನಿಂದು, ಕಾದುವರಿಗೇನು ಭೀತಿ? ಅದೆ ನೆಲೆಯಿದಂತೆ ನೋಟದ ಬರುಬರಿಗೇನು ಭೀತಿ? ಎನ್ನ ಸುಖದುಃಖಕ್ಕೆ ಮುಯ್ಯಾಂತು, ನೀ ಮುಂಚು, ನಾ ಹಿಂಚಾಗಿಯಿದ್ದ ಮತ್ತೆ ಎನಗೆ ಬಂದ ಉಬ್ಬಸವಾವುದು? ಆಳಿನಪಮಾನ ಆಳ್ದಂಗೆ ಆದಂತೆ ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ, ನೀನಿರ್ದಂತೆ ಎನಗಾವ ಭೀತಿ?