Index   ವಚನ - 47    Search  
 
ತನುವಿನೊಳಗಣ ತನುವಿನಲ್ಲಿ ಕೂಡಿದವನಾರೊ? ಮನದೊಳಗಣ ನೆನಹಿನಲ್ಲಿ ನೆನೆಹಿಸಿಕೊಂಬವನಾರೊ? ಬಾಯೊಳಗಣ ಬಾಯಲ್ಲಿ ಉಂಬವನಾರೊ? ಕಣ್ಣಿನೊಳಗಣ ಕಣ್ಣಿನಲ್ಲಿ ನೋಡುವನಾರೊ? ನಾ ನೀನೆಂಬಲ್ಲಿ ಅದೇನು ಹೇಳಾ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.