Index   ವಚನ - 55    Search  
 
ಪಿಂಡ ಬಲಿದು ಹುಟ್ಟಿದಲ್ಲಿ ಮೂರು ಸಂದಾಯಿತ್ತು. ಆ ಮೂರು ಸಂದಿನೊಳಗೆ ಕೂಡಿದ ಕೀಲು ಕೂಟ. ಅಂದು ಇಂದು ಎಂದೆಂದಿಂಗೆ ಬೆಂಬಳಿ ಬಿಡದು. ಇದರ ಸಂಗವೇನಯ್ಯಾ? ಸಗರದ ಬೊಮ್ಮನೊಡೆಯ ತನುಮನದಲ್ಲಿ ಸುಸಂಗನಾಗಯ್ಯಾ.