ಬೆಂಕಿಗೆ ಚಳಿ ಬಂದು, ಉದಕವ ಕಾಯಲಾಗಿ,
ಹಿಮಹಿಂಗಿ ಜ್ವರ ಬಂದಿತ್ತು.
ಜ್ವರದ ತಾಪಕಾರದೆ ಅರುಹಿರಿಯರೆಲ್ಲರು ಮಡಿದರು.
ಅಜ ಕುಡಿಕೆಯ ನೀರಿನಲ್ಲಿ, ಆ ಕುಡಿಕೆಯ ಒಡೆಯದೆ ಒಡೆದು,
ಹಿಮ್ಮಡಿಯಲ್ಲಿ ಒಡನೋಡಿ, ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವನರಿಯಬಲ್ಲಡೆ.
Art
Manuscript
Music
Courtesy:
Transliteration
Beṅkige caḷi bandu, udakava kāyalāgi,
himahiṅgi jvara bandittu.
Jvarada tāpakārade aruhiriyarellaru maḍidaru.
Aja kuḍikeya nīrinalli, ā kuḍikeya oḍeyade oḍedu,
him'maḍiyalli oḍanōḍi, sagarada bom'manoḍeya
tanumana saṅgamēśvaraliṅgavanariyaballaḍe.