Index   ವಚನ - 86    Search  
 
ಹಗೆ ನಿದ್ರೆಗೈವಲ್ಲಿ ಕೊಲುವ ಅರಿ ಬಂದು, ಮರೆದೊರಗಿದನೆಯೆಂದು ಎಬ್ಬಿಸಿ, ನಿನ್ನ ನಾ ಕೊಲಬಂದೆ ಎಂದನೆ. ಅರಿ ನೋಡಿ, ಕೊಲಬಂದವನಲ್ಲಾ ಎಂದು ಎನ್ನನುಳುಹಿದೆ. ಎನಗೂ ನಿನಗೂ ಹಗೆಯಿಲ್ಲ. ಎನ್ನೆಡೆ ನಿನ್ನೆಡೆಗೆ ತಂದು ಹಾಕಿದವರೆ ಹಗೆ, ನಾನೂ ನೀನೂ ಕೂಡಿ ಹಗೆಯನರಸಿ [ಕೊಲ್ಲುವ], ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿ