Index   ವಚನ - 1    Search  
 
ಆವಾವಾಚರಣೆಯ ತೊಟ್ಟಲ್ಲಿ ಅನುಸರಿಯಿಲ್ಲದಿಪ್ಪುದೆ, ಗುರುಚರಲಿಂಗಪೂಜೆ. ಖಂಡಿತ ಕಾಯಕಕ್ಕೆ ಇಂದಿಂಗೆ ನಾಳಿಂಗೆಂಬ ಸಂದೇಹವಿಲ್ಲದಲ್ಲಿಯೆ ಸರ್ವಶೀಲ. ತಾಗು ನಿರೋಧ ಬಂದಲ್ಲಿ, ಕಂದದೆ ಕುಂದದೆ ಎಂದಿನಂತಿದ್ದಲ್ಲಿ ಶಿವಲಿಂಗಪೂಜೆ. ಇದಕ್ಕೆ ಹಿಂದುಮುಂದು ವಿಚಾರಿಸಲಿಲ್ಲ, ಇದಕ್ಕೆ ಐಘಂಟೇಶ್ವರಲಿಂಗ ಸಾಕ್ಷಿಯಾಗಿ.