ಒಂದ ಹಿಡಿವಲ್ಲಿ ಸತ್ತಿಗೆಯವ,
ಇದಿರ ಉಭಯದ ಸಂದ ಕಡಿವಲ್ಲಿ ಕೊಡಲಿಯವ.
ಹಿಂದುಮುಂದಣ ತಮವನೊಂದುಗೂಡಿ,
ಕೆಡಿಸುವುದಕ್ಕೆ ಪಂಜಿನವ.
ಇದು ಅಂದು ಬಂದ ಬೆಸದ ಕಾಯಕ,
ಐಘಂಟೇಶ್ವರಲಿಂಗವಿದ್ದಲ್ಲಿಯೆ ಬೆಸನಿಲ್ಲದಿರಬೇಕು.
Art
Manuscript
Music
Courtesy:
Transliteration
Onda hiḍivalli sattigeyava,
idira ubhayada sanda kaḍivalli koḍaliyava.
Hindumundaṇa tamavanondugūḍi,
keḍisuvudakke pan̄jinava.
Idu andu banda besada kāyaka,
aighaṇṭēśvaraliṅgaviddalliye besanilladirabēku.