Index   ವಚನ - 6    Search  
 
ಕಾಯಕವೆಂದು ಕಲ್ಪಿಸಿ ಮಾಡುವಲ್ಲಿ, ತುಡುಗುಣಿಯಂತೆ ಮಡದಿ ಮಕ್ಕಳಿಗೆಂದು ಹೆಡಿಗೆ ಗಳಿಗೆಯಲ್ಲಿ ಹೊಯ್ದು, ಕಡ ಪರಪತಿಯೆಂದು ಕೊಟ್ಟಡೆ, ಅದು ಗುರುಪರಚರ ಈ ಮೂರರೊಡವೆಯಲ್ಲ. ಆತನು ಮೃಡಭಕ್ತನೆಂದು ಅವನ ಮನೆಯಲ್ಲಿ ಒಡಗೂಡಿ ಉಂಡಡೆ, ಅಡಗ ನಾಯಿ ತಿಂದು, ಮಿಕ್ಕುದ ನರಿ ತಿಂದಂತೆ, ಐಘಂಟೇಶ್ವರಲಿಂಗವೆ ಸಾಕ್ಷಿಯಾಗಿ.