Index   ವಚನ - 1    Search  
 
ಸಪ್ತಕೋಟಿ ಮಹಾಮಂತ್ರ ಉಪಮಂತ್ರಂಗಳಿಗೆ ಲೆಕ್ಕವಿಲ್ಲ, ಚಿತ್ತವ್ಯಾಕುಲನಾಗಿ ಭ್ರಮಿಸದಿರಾ, ಎಲೆ ಮನವೆ ಶಿವಾಶಿವಾ ಶಿವಾಶಿವಾ ಶಿವಾಶಿವಾ ಶಿವಾಶಿವಾ ಶಿವಾಶಿವಾ ನಮೋ ನಮೋ, ಶಿವಾಶಿವಾ ಶಿವಾಶಿವಾ ಶಿವಾಶಿವಾ ಶಿವಾಶಿವಾ ಶಿವಾಶಿವಾ ಶರಣೆಂದಡೆ ಸಾಲದೆ? ಅದೆಂತೆಂದಡೆ: ಶಿವೇತಿ ಮಂಗಲಂ ನಾಮ ಯಸ್ಯ ವಾಚಿ ಪ್ರವರ್ತತೇ | ಭಸ್ಮೀ ಭವಂತಿ ತಸ್ಯಾಸು ಮಹಾಪಾತಕೋಟಯಃ|| ಇಂತೆಂದುದಾಗಿ, ಎನಗಿದೆ ಮಂತ್ರ, ಎನಗಿದೆ ತಂತ್ರ, ಎನಗಿದೆ ಗತಿಮತಿ ಚೈತನ್ಯವಯ್ಯಾ. ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯನ ತೋರಿದ ಎನಗಿದೇ ಸಹಜಮಂತ್ರ.