Index   ವಚನ - 5    Search  
 
ವಾರಿಯಿಂದಾದ ಮುತ್ತು ಶಾಂತಿಯ ಜಲದಲ್ಲಿ ಹಾಕಲಿಕಾಗಿ, ಮುನ್ನಿನ ಎನ್ನಯ ವಾರಿ ಬಂದಿತ್ತೆಂದು ತಾ ಗಟ್ಟಿಗೊಂಡುದಿಲ್ಲ. ಈ ಮುತ್ತು ತದ್ಭಾವ ಅಪ್ಪುವಿನಂತಾದುದಿಲ್ಲ. ಈ ಉಭಯದ ಭೇದವ ತಿಳಿದಡೆ, ದ್ವೈತಾದ್ವೈತವ ಬಲ್ಲರೆಂಬೆ. ಹೀಂಗಲ್ಲದೆ ಗೆಲ್ಲಸೋಲಕ್ಕೆ ಹೋರುವ ಕಲ್ಲೆದೆಯವರಿಗೆಲ್ಲಿಯದೊ, ಗೋಳಕಾಕಾರ ವಿಶ್ವವಿರಹಿತ ಲಿಂಗವು ಸಾಧ್ಯವಪ್ಪುದೆ?