Index   ವಚನ - 3    Search  
 
ಕಾಲುಕುಪ್ಪಸವ ಮೇಲಾಗಿ ಹೊಲಿದೆ. ಅಂಗದ ಕುಪ್ಪಸವ ಮಂಡೆಗೆ ಹೊಲಿದೆ. ಮಂಡೆಗೆ ಒಂಬತ್ತು ಚಿಪ್ಪು ಸರ್ವಾಂಗಕ್ಕೆ ತೊಡಿಸುವೆ. ಇದರ ಸಂದಿನ ಕೂಟವ ಬಲ್ಲಡೆ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವ.