Index   ವಚನ - 17    Search  
 
ಎಲ್ಲಾ ದೈವಕ್ಕೆ ವಿಷ್ಣು ಘನವೆಂಬ ವೇದಾದಿಗಳು ನೀವು ಕೇಳಿ. ಎಲ್ಲಾ ದೈವಕ್ಕೆ ಸರಿಯೆಂಬ ಮಾಯಾವಾದಿಗಳು ನೀವು ಕೇಳಿ. ಗಾಯತ್ರಿ ಛಂದ, ವಿಶ್ವಾಮಿತ್ರ ಋಷಿ, ಸವಿತಾ ದೇವ, ಅಗ್ನಿ ಮುಖ, ಬ್ರಹ್ಮ ಶಿರ, ವಿಷ್ಣು ಹೃದಯ, ರುದ್ರ ಲಲಾಟವೆಂದು ಹೀಂಗೆ ಹೇಳುತ್ತಿದೆ ಗಾಯತ್ರಿ ಕಲ್ಪದಲ್ಲಿ : ಓಂ ಭೂಃ ಓಂ ಭುವಃ ಓಂ ಸುವಃ ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿಯೋ ಯೋನಃ ಪ್ರಚೋದಯಾತ್ || ಎಂದುದು ಶ್ರುತಿ. ಸರ್ವದೇವ ಶಿಖಾಮಣಿ ಸೊಡ್ಡಳನಲ್ಲದೆ ದೈವವಿಲ್ಲೆಂದುದು.