ಏಕಭಾಜನದಲ್ಲಿ ಸಹಭೋಜನವ ಮಾಡುವಡೆ,
ಅಷ್ಟತನು ಬೆಂದು ನಷ್ಟವಾಗಿರಬೇಕು.
ಅಂಗವಿಕಾರ ಬಿಡದು,
ಆನು ಲಿಂಗವಾದೆನೆಂಬ ಭಂಗವ ನೋಡಾ.
ಸವಿ ಸವೆಯದು,
ತಮ್ಮ ಮರೆಯರು, ಸೊಡ್ಡಳ ಮೆಚ್ಚ.
Art
Manuscript
Music
Courtesy:
Transliteration
Ēkabhājanadalli sahabhōjanava māḍuvaḍe,
aṣṭatanu bendu naṣṭavāgirabēku.
Aṅgavikāra biḍadu,
ānu liṅgavādenemba bhaṅgava nōḍā.
Savi saveyadu,
tam'ma mareyaru, soḍḍaḷa mecca.