Index   ವಚನ - 22    Search  
 
ಒಂದು ಇಂದ್ರಿಯ ಮೊದಲಾದುದಕ್ಕೆ ಕಡೆಯಿಲ್ಲ. ಕುಂಜರನು ಸ್ಪರ್ಶೇಂದ್ರಿಯದ ಬಳಿ ಸಂದು, ಘಣಿರಾಗರಸದಿಂದ, ಭ್ರಮರ ಸೌರಭ್ಯದಿಂದ ಮತ್ಸ್ಯರುಚಿಯಿಂದ, ಪತಂಗ ರೂಪಿಂದ, ಒಂದೊಂದು ವಿಷಯದಲ್ಲಿ, ಒಂದೊಂದು ಪ್ರಾಣಿಗಳು ನೊಂದು, ಬಂಧನಕ್ಕೆ ಬಂದುದನರಿಯಾ. ಪಂಚೇಂದ್ರಿಯದ ಬೆಂಬಳಿಯಲ್ಲಿ ಹರಿವ ಮನುಜರ ಕೊಂದುಕೂಗದೆ ಮಾಯೆ, ದೇವರಾಯ ಸೊಡ್ಡಳ ನೋಡೆ.