Index   ವಚನ - 24    Search  
 
ಕರ್ತಾರನಟ್ಟಿದ ವಿಧಿಗಂಜಿ, ಪಾತಾಳಲೋಕದಲ್ಲಿ ಹೊಕ್ಕಡಗಿದಡೆ, ಭೂತಳದ ಮೇಲೆ ಹೊಮ್ಮರೆಯಾಗಿ ಹರಿದಡೆ, ಕೊಲ್ಲದೆ ವಿಧಿ ? ತಪ್ಪು ತಡೆಯಿಲ್ಲದ ತಪಸಿಗಪ್ಪುದೆ ಶಲದ ವಿಧಿ ? ಹರನಟ್ಟಿದ ಬೆಸನದಿಂದ ಮೆಕ್ಕೆ ಹಾವಾಗಿ ತಿನ್ನದೆ ವಿಧಿ ? ದೇವ ದಾನವ ಮಾನವರ ಒಕ್ಕಲಿಕ್ಕಿ ಕೊಲ್ಲದೆ ವಿಧಿ ? ಮುಕ್ಕಣ್ಣ ಸೊಡ್ಡಳನಾಣತಿವಿಡಿದು.