ಕಾಲ ಕಾಮ ಮಹಾಕಾಲ ಪ್ರಳಯಕಾಲ,
ಕಾಲನ ಕೊಂದು, ಹರ ಲೀಲೆಯನಾಡುವಂದು,
ಬ್ರಹ್ಮ ವಿಷ್ಣು ಜಿನಪಾಲರೆಂಬವರೆಲ್ಲಿದ್ದರೊ ?
ಸರಿಯೆಂಬ ನಾರಸಿಂಹನ ಶಿರವರಿದು,
ಹರನ ಶಿವಾಲಯಕ್ಕೆ ಕೀರ್ತಿಮುಖವಾಗಿದೆ.
ಹರಿಯ ಚರ್ಮವ ಸೀಳಿ, ಹರನ ಖಟ್ವಾಂಗವಾಗಿದೆ.
ಮತ್ಸ್ಯಾವತಾರನ ಕರುಳಂ ತೆಗೆದು,
ಹರನ ಜಡೆಯಲ್ಲಿ ಉತ್ತರಿಗೆಯಾಗಿದೆ.
ಸರಿಯೆಂಬ ಹೆಸರಿನ್ನಾರಿಗೊ,
ಮುಕ್ಕಣ್ಣ ಸೊಡ್ಡಳಂಗಲ್ಲದೆ.
Art
Manuscript
Music
Courtesy:
Transliteration
Kāla kāma mahākāla praḷayakāla,
kālana kondu, hara līleyanāḍuvandu,
brahma viṣṇu jinapālarembavarelliddaro?
Sariyemba nārasinhana śiravaridu,
harana śivālayakke kīrtimukhavāgide.
Hariya carmava sīḷi, harana khaṭvāṅgavāgide.
Matsyāvatārana karuḷaṁ tegedu,
harana jaḍeyalli uttarigeyāgide.
Sariyemba hesarinnārigo,
mukkaṇṇa soḍḍaḷaṅgallade.