ನೆಲದ ಬೊಂಬೆಯ ಮಾಡಿ, ಜಲದ ಬಣ್ಣವನುಡಿಸಿ,
ಹಲವು ಪರಿಯಾಶ್ರಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ,
ವಾಯುವನಲನ ಸಂಚಕ್ಕೆ ಅರಳೆಲೆಯ ಶೃಂಗಾರವ ಮಾಡಿ,
ಆಡಿಸುವ ಯಂತ್ರವಾಹಕನಾರೋ?
ಬಯಲ ಕಂಬಕ್ಕೆ ತಂದು ಸಯವೆಂದು ಪರವ ಕಟ್ಟಿದಡೆ
ಸಯವದ್ವಯವಾಯಿತ್ತು-ಏನೆಂಬೆನು ಗುಹೇಶ್ವರಾ!
Hindi Translationधरती पुतली बनाकर, जल रंग चढ़ाकर,
कई रीती से आवाज़ करनेवाले घूँघरू बाँधकर,
वायु अनल संयुक्त कर, गहने से श्रृंगार कर
खेलानेवाला यंत्रवाहक कौन है ?
माया कंभ पर लाकर नित्य और पर को स्थापित करें तो,
सय अद्वय हुआ; क्या कहें गुहेश्वरा ?
Translated by: Eswara Sharma M and Govindarao B N
English Translation Who is the Engineer who has moulded
This doll of clay,
Draped it in a fabric of water,
Bound to it, in diverse states of life,
A jingle of tinkling bells;
Dowered it with air and fire,
Crowned it with adornments,
And now sets it playing?
When this Formless one has been bound to form,
When you have attained the Self
And made it the temple of the Divine,
There is no more one and two,
O Guhōsvara.
Tamil Translationமண்பொம்மையைச் செய்து, வண்ணநீரில் அணிசெய்து,
பலவகைகளில் ஒலிக்கும் சலங்கையைக் கட்டி,
காற்றையும் அழலையும் இணைத்து,
அரச இலையிலலங்கரித்து
ஆட்டுவிப்பவன் யாரோ?
உடல் நிலையற்றது எனத் தெளிந்து
பரம்பொருள் நிலையானது
எனும் உண்மையை உணரின் “தான்” என்பது அகன்று
பரம்பொருளுடன் ஒன்றியது.
இதனை என்னென்பேன் குஹேசுவரனே?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಮಾಯಾವಿಲಾಸವಿಡಂಬನಸ್ಥಲ
ಶಬ್ದಾರ್ಥಗಳುಅರಳೆಲೆಯ ಶೃಂಗಾರ = ಆಯುಷ್ಯ ಮತ್ತು ಭೋಗಗಳನ್ನು ನಿರ್ಧರಿಸುವ ಪ್ರಾರಬ್ಧ; ಆಡಿಸುವ ಯಂತ್ರವಾಹಕ = ತನ್ನ ಮಾಯಾಶಕ್ತಿಯ ಮೂಲಕ ಇಂಥ ಸೊಬಗಿನ ದೇಹವನ್ನು ರೂಪಿಸಿದವ, ಮಹೇಶ್ವರ.; ಜಲದ ಬಣ್ಣ = ಮಾಸುವ ರೂಪುರಂಗು; ನೆಲದ ಬೊಂಬೆ = ಮಣ್ಣಿನಿಂದಾದ ದೇಹ; ಬಯಲ ಕಂಭಕ್ಕೆ ತಂದು = ಈ ದೇಹ ಅಶಾಶ್ವತವಾಗಿದೆ ಎಂಬುದನ್ನು ನಿಶ್ಚಯಗೊಳಿಸಿ; ವಾಯು ಅನಲನ ಸಂಚ = ಗಾಳಿ ಮತ್ತು ಅಗ್ನಿ ಇವುಗಳ ಸಂಯೋಜನೆ; ಸಯವು ಅದ್ವಯವಾಯಿತ್ತು = ಸ್ವಯಂ, ತಾನು; ಜೀವಾತ್ಮನು ಪರವಸ್ತುವಿನಲ್ಲಿ ಒಂದಾದನು; ಸಯವೆಂದು ಪರವ ನೆಲೆಗೊ = ಸಯ ಅಂದರೆ ನಿತ್ಯ, ಪರ ಎಂದರೆ ಪರವಸ್ತು; ಪರವಸ್ತುವೇ ನಿತ್ಯವಾದುದು ಎಂಬ ಸತ್ಯವನ್ನು ನೆಲೆಗೊಳಿಸಿದರೆ; ಹಲವು ಪರಿಯಾಶ್ರಮದಲಿ = ವಿವಿಧ ವಿಷಯಗಳೊಂದಿಗೆ ವ್ಯವಹರಿಸುವ ಇಂದ್ರಿಯಗಳು; Written by: Sri Siddeswara Swamiji, Vijayapura