Index   ವಚನ - 54    Search  
 
ಪಕ್ಷಿ ಜನಿಸಿ ಅಮೃತವನರಿಯದಂತೆ, ಶಿವನಲ್ಲದೆ ಅನ್ಯದೈವ ಭಜನೆಯುಳ್ಳವರೇತಕ್ಕೆ ಬಾತೆ ? ಅನ್ಯಾಯಿತ ವಧೆಯ ಮಾಡುವ ಅರ್ತಿಕಾರ ದೋಷವನರಿಯ. ಪಾಪಿಯ ಕೈಯ ದಾರ, ಗಾಳದ ಕೊನೆಗೆ ಬಂದುಂಡ ಮತ್ಸ್ಯದ ಲಕ್ಷಣದಂತೆ, ಮನುಷ್ಯ ಜನ್ಮದಲ್ಲಿ ಹುಟ್ಟಿ, ಶಿವಾಚಾರವನರಿಯದೆ ದುರಾಚಾರಕ್ಕೆರಗುವರು, ಹಿರಿಯ ದೈವವನರಿಯದೆ, ಕಿರುಕುಳ ದೈವವಂ ಪಿಡಿವರು. ಕೇಶವಂಗೆ ದಾಸತ್ವಮಂ ಮಾಡಿದಡೆ ಪ್ರತ್ಯಕ್ಷ ಮುಡುಹ ಸುಡಿಸನೆ ? ಮೈಲಾರದೇವರೆಂಬವರ ನಾಯಾಗಿ ಬಗುಳಿಸನೆ ? ಜಿನ ದೈವವೆಂಬವರ ತಲೆಯ ತರಿಸನೆ ? ಹುಲುದೈವವ ಪೂಜಿಸಿದವರು ಕೈಲಾಸದ ಬಟ್ಟೆಯ ಹೊಲಬುದಪ್ಪಿದರು. ಮುನ್ನ ಮಾಡಿದವರಿಗಿದಿಯಾಯಿತ್ತು. ಇನ್ನು ಮಾಡುವರಿಗೆ ವಿಧಿಯಹುದೊ. ನಮ್ಮ ದೇವರಾಯ ಸೊಡ್ಡಳಂಗೆ ಒಂದರಳನೇರಿಸಿದವ, ಕೈಲಾಸಕ್ಕೆ ಹೋದನು.