Index   ವಚನ - 1602    Search  
 
ಹೂವ ಕೊಯ್ಯ ಹೋಗಿ ಕರಡಿಗೆಯ ಮರೆದೆ; ಪೂಜಿಸ ಹೋಗಿ ಲಿಂಗವ ಮರೆದೆ. ಗಾಡಿಗರೊಡನಾಡಿ ಜೇನನಳಿದು ತುಪ್ಪವ ಮರೆದೆ. ಅವರೆಲ್ಲರ ಒಡನಾಡಿಯಾಗಿ ಗುಹೇಶ್ವರಲಿಂಗವ ಮರೆದೆ.