ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ,
ರುದ್ರಪದವಿಯನೊಲ್ಲ, ಇಂದ್ರಪದವಿಯನೊಲ್ಲೆ,
ಉಳಿದ ದೇವತೆಗಳ ಪದವಿಯನೊಲ್ಲೆ.
ಎಲ್ಲಕ್ಕೂ ಒಡೆಯನಾದ ಶಿವನ ಪ್ರಮಥಗಣಂಗಳ
ತಿಪ್ಪೆಯ ಮೇಲಣ ಹುಳುವಾಗಿ ಹುಟ್ಟುವ ಪದವಿಯ ಕರುಣಿಸು,
ಮಹಾಮಹಿಮ ಸೊಡ್ಡಳಾ.
Art
Manuscript
Music
Courtesy:
Transliteration
Brahmapadaviyanolle, viṣṇupadaviyanolle,
rudrapadaviyanolla, indrapadaviyanolle,
uḷida dēvategaḷa padaviyanolle.
Ellakkū oḍeyanāda śivana pramathagaṇaṅgaḷa
tippeya mēlaṇa huḷuvāgi huṭṭuva padaviya karuṇisu,
mahāmahima soḍḍaḷā.