Index   ವಚನ - 71    Search  
 
ಭಕ್ತಭಕ್ತನೆಂದು ಯುಕ್ತಿಗೆಟ್ಟು ನುಡಿವಿರಿ, ಭಕ್ತಿಸ್ಥಲವೆಲ್ಲರಿಗೆಲ್ಲಿಯದೊ? ಹಾಗದಾಸೆ, ಹಣವಿನಾಸೆಯುಳ್ಳನ್ನಕ್ಕ ಭಕ್ತನೆ? ಅಯ್ಯಾ, ಅರ್ಥಪ್ರಾಣಾಭಿಮಾನ ವಂಚನೆಯುಳ್ಳನ್ನಕ್ಕ ಭಕ್ತನೆ? ಹೊನ್ನು ಹೆಣ್ಣು ಮಣ್ಣು ಹಣಿದವಾಡದದನ್ನಕ್ಕ ಭಕ್ತನೆ? ಭಕ್ತರಿಗೆ ನಾವು ಹೇಳಿದಡೆ ದುಗುಡ ದುಮ್ಮಾನ, ನೀನೊಮ್ಮೆ ಹೇಳಾ, ಪ್ರಳಯಕಾಲದ ಸೊಡ್ಡಳಾ.