Index   ವಚನ - 75    Search  
 
ಮನದ ಸಂಚದೋವರಿಯೊಳಗೆ, ಮಿಂಚಿನ ಗೊಂಚಲು ಬಳ್ಳಿವರಿಯಿತ್ತಯ್ಯಾ. ಎನ್ನ ಕಾಯದ ಕರಣಂಗಳೊಳಗೆ, ನಿರುಪಮಸುಖ ಸಾಧ್ಯವಾಯಿತ್ತು. ಬಯಸುವ ಬಯಕೆ ಕೈಸಾರಿತ್ತು, ಅರಸುವ ಅರಕೆ ನಿಂದಿತ್ತು. ಆಹಾ, ಕರತಲಾಮಲಕವಾಯಿತ್ತಲ್ಲಾ! ಸತ್ಯಶರಣರ ದರುಶನ ಏನ ಮಾಡದೊ? ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ ಶ್ರೀಪಾದವ ಕಂಡು, ಬದುಕಿದೆನಯ್ಯಾ.