ಮುರಿಸಬೇಕು ಹೊಲೆಯರ ಕೈಯಿಂದವರ ಮನೆಯನು,
ಕೆರಿಸಬೇಕು ಮಂಡೆಯನೇಳು ಪಟ್ಟಿಯ ಮಾಡಿ,
ಕುಳ್ಳಿರಿಸಬೇಕು ಕತ್ತೆಯ ನಡುಬೆನ್ನ ಮೇಲೆ,
ಹುಟ್ಟಿಗೆಯನುಡಿಸಬೇಕು,
ಹಳೆಮರವ ಸತ್ತಿಗೆಯ ಹಿಡಿಯಬೇಕವಗೆ,
ನಿಟ್ಟೊರಸಬೇಕು ನೊಸಲಕ್ಷರವ,
ನಾಲಿಗೆಯ ಸರ್ರರ್ಸರ್ರನೆ ಸೀಳಬೇಕು,
ಎನ್ನೊಡೆಯ ಮಹಾಮಹಿಮ ಸೊಡ್ಡಳಂಗೆ
ಅನ್ಯದೈವ ಸರಿಯೆಂಬ ಕುನ್ನಿಮಾನವನ.
Art
Manuscript
Music
Courtesy:
Transliteration
Murisabēku holeyara kaiyindavara maneyanu,
kerisabēku maṇḍeyanēḷu paṭṭiya māḍi,
kuḷḷirisabēku katteya naḍubenna mēle,
huṭṭigeyanuḍisabēku,
haḷemarava sattigeya hiḍiyabēkavage,
niṭṭorasabēku nosalakṣarava,
nāligeya sarrarsarrane sīḷabēku,
ennoḍeya mahāmahima soḍḍaḷaṅge
an'yadaiva sariyemba kunnimānavana.