ಸಜ್ಜನನಾದ ಶರಣನ ಮುಂದೆ,
ಮಜ್ಜನಕ್ಕೆರೆವೆನಯ್ಯಾ ಶಿವಲಿಂಗಕ್ಕೆ.
ದುರ್ಜನರೊಡನೆ ಹೋಗಿ,
ಅನ್ಯದೈವಕ್ಕೆ ಸಾಹಿತ್ಯ ಕೆಳಗಾಗಿ ಬೀಳುವರು ನೋಡಾ.
ಹಾದರಕ್ಕೆ ಹುಟ್ಟಿದವರಿಗಲ್ಲದೆ
ಇಂತಹ ಬುದ್ಧಿಯಿಲ್ಲ ಕಾಣಾ,
ದೇವರಾಯ ಸೊಡ್ಡಳಾ.
Art
Manuscript
Music
Courtesy:
Transliteration
Sajjananāda śaraṇana munde,
majjanakkerevenayyā śivaliṅgakke.
Durjanaroḍane hōgi,
an'yadaivakke sāhitya keḷagāgi bīḷuvaru nōḍā.
Hādarakke huṭṭidavarigallade
intaha bud'dhiyilla kāṇā,
dēvarāya soḍḍaḷā.