Index   ವಚನ - 104    Search  
 
ಹಳೆಯ ಮಿಣಿಯ ಕಡಿವನು, ನಾದ ಹೋದ ಕೆರಹನು, ಬೂದಿಹೋದ ಎರಹನು. ಒಣಗಿದೆಲುವ ನಾಯ ಕೊಂಡೊಡಲ ತುಂಬಿ, ಬೂದಿಯೊಳಗೆ ಕೆಡದಿಪ್ಪ ಶ್ವಾನಬಲ್ಲುದೆ? ಅಮೃತಾನ್ನಗಳಿಪ್ಪೆಡೆಯಡಿಗಡಿಗೆ ಅಹಂಕಾರ ಗರ್ವಗಳ ನುಡಿದು, ಪೊಡವಿ ಬ್ರಹ್ಮಾಂಡದೊಡೆಯ ಸೊಡ್ಡಳಂಗೆ ವಿಷ್ಣು ಸರಿಯೆಂದು ನುಡಿವ ಕುನ್ನಿಗಳ ತಲೆಗಳೊಡೆದು ಕೆಡೆವ[ರು]. ಕಳುವ ಕಳ್ಳಂಗೆ ಕತ್ತಲೆಯಲ್ಲದೆ ಬೆಳಗು ಸಮನಿಸುವುದೆ?