ಘಟಕುಂಭದಲ್ಲಿ ಜೀವನೆಂಬ ಜೇಗಟೆ ಬಂದಿತ್ತು.
ದೃಷ್ಟವ ಇಷ್ಟದಲ್ಲಿ ಕುಟ್ಟಲಾಗಿ,
ಮೊಳೆ ಮುರಿದು ಒಡಲೊಡೆಯಿತ್ತು.
ಅಂಗದ ಅಗ್ನಿಯಲ್ಲಿ ಬೇಯಿಸಿ,
ಮೂರುಸಂಗವಡೆದ ಮಡಕೆಯ ಓಡಿನಲ್ಲಿ
ಶ್ರುತ ದೃಷ್ಟ ಅನುಮಾನವೆಂಬ ಕೋಲಿನಲ್ಲಿ ಕಡೆಯಲಾಗಿ,
ರಸ ಒಳಗಾಗಿ ಹಿಪ್ಪೆ ಹೊರಗಾಯಿತ್ತು,
ಆ ಸುಧೆಯ ತುಂಬಿ ತಂದೆ.
ಒಮ್ಮೆಗೆ ಕೊಂಡಲ್ಲಿ ಬ್ರಹ್ಮಕಲ್ಪವ ಕೆಡಿಸಿತ್ತು.
ಮತ್ತೊಮ್ಮೆ ಕೊಂಡಲ್ಲಿ ವಿಷ್ಣುವಿನ ಗೊತ್ತ ಕಿತ್ತಿತ್ತು.
ಮೂರೆಂದು ಮೊದಲ ಹಾಗವ
ಮೀರಿದ ರುದ್ರನ ಅಗಡವ ಕಿತ್ತಿತ್ತು.
ಅರೆದು ಕೊಂಡಲ್ಲಿ ಸುಧೆ,
ಮರೆದು ಕೊಂಡಲ್ಲಿ ಸುರೆಯಾಗಿ,
ಅರುಹಿರಿಯರ ಮರವೆಯ ಮಾಡಿತ್ತು.
ನಾ ತಂದ ಬೆವಹಾರವ ಅಹವರೆಲ್ಲರೂ ಕೊಳ್ಳಿ,
ಧರ್ಮೇಶ್ವರಲಿಂಗವನರಿಯಬಲ್ಲಡೆ.
Art
Manuscript
Music
Courtesy:
Transliteration
Ghaṭakumbhadalli jīvanemba jēgaṭe bandittu.
Dr̥ṣṭava iṣṭadalli kuṭṭalāgi,
moḷe muridu oḍaloḍeyittu.
Aṅgada agniyalli bēyisi,
mūrusaṅgavaḍeda maḍakeya ōḍinalli
śruta dr̥ṣṭa anumānavemba kōlinalli kaḍeyalāgi,
rasa oḷagāgi hippe horagāyittu,
ā sudheya tumbi tande.
Om'mege koṇḍalli brahmakalpava keḍisittu.
Mattom'me koṇḍalli viṣṇuvina gotta kittittu.
Mūrendu modala hāgava
mīrida rudrana agaḍava kittittu.
Aredu koṇḍalli sudhe,
maredu koṇḍalli sureyāgi,
aruhiriyara maraveya māḍittu.
Nā tanda bevahārava ahavarellarū koḷḷi,
dharmēśvaraliṅgavanariyaballaḍe.