Index   ವಚನ - 7    Search  
 
ನುಲಿಯೊಡೆಯರೆ ನಿಮ್ಮಾಳ್ದರೇನಾದರು? ಆಳ್ದರು ಜಂಗಮದ ಪಾದದ ಕೆಳಗೈದಾರೆ. ಪಾದ ಲಿಂಗವಪ್ಪುದೆ? ಪಾದಕ್ಕೆಯೂ ಲಿಂಗಕ್ಕೆಯೂ ಭೇದವುಂಟೆ? ನಾವರಿದುದಿಲ್ಲ, ಸುಮ್ಮನಿರಿ ನೀವು. ಇದಕ್ಕಿನ್ನೇನು ಪ್ರಾಯಶ್ಚಿತ? ಶಿವಶರಣರ ಚರಣೋದಕವ ಕರುಣಿಸಬೇಕು, ಕೊಡಬಾರದು. ಅದೇನು ಕಾರಣ? ನೀವು ಲಿಂಗವ ಕೇಳಿದಿರಾಗಿ, ಶರಣಂಗೆ ಲಿಂಗವಿಲ್ಲ, ನಾವು ಪೂಜಕರಲ್ಲ. ಭಕ್ತಿಯೆಂಬುದಾವುದು? ಅರ್ಧಶರೀರ ಶಿವನಾರು? ದಕ್ಷಿಣಂಗೆ ಮಹೇಶ್ವರನಾರು? ಭೃಂಗೀಶ್ವರನೊಬ್ಬನೆ? ಮತ್ತೆ ಕಂಡುದಿಲ್ಲ, ಧರ್ಮೇಶ್ವರ[ಲಿಂಗಾ].