ಲೋಕಾಂತವಳಿದು ಏಕಾಂತ ಉಳಿದಲ್ಲಿ
ಏಕೈಕಮೂರ್ತಿಯ ಸಂಗ ಸಮನಿಸಿತ್ತೆನಗೆ.
ಎನ್ನ ನುಡಿ ಆತನ ಕಿವಿಗೆ ಇನಿಯದಾಯಿತ್ತು
ಆತನ ನುಡಿ ಎನ್ನ ಕಿವಿಗೆ ಇನಿಯದಾಯಿತ್ತು.
ಇಬ್ಬರ ನುಡಿಯೂ ಒಂದೇಯಾಗಿ ನಿಶ್ಯಬ್ದ ವೇಧಿಸಿತ್ತು.
ಈ ಸುಖದ ಸೋಂಕಿನ ಪುಣ್ಯದ ಫಲದಿಂದ
ಅನುಪಮಚರಿತ್ರ ಪ್ರಭುದೇವರ ನಿಲುವ ಕಂಡು,
ನಾನು ಧನ್ಯನಾದೆನು ಕಾಣಾ, ಏಕಾಂತ ವೀರಸೊಡ್ಡೊಳಾ.
Art
Manuscript
Music
Courtesy:
Transliteration
Lōkāntavaḷidu ēkānta uḷidalli
ēkaikamūrtiya saṅga samanisittenage.
Enna nuḍi ātana kivige iniyadāyittu
ātana nuḍi enna kivige iniyadāyittu.
Ibbara nuḍiyū ondēyāgi niśyabda vēdhisittu.
Ī sukhada sōṅkina puṇyada phaladinda
anupamacaritra prabhudēvara niluva kaṇḍu,
nānu dhan'yanādenu kāṇā, ēkānta vīrasoḍḍoḷā.