Index   ವಚನ - 2    Search  
 
ಪ್ರಸಾದವೆಂದು ಭಾವಿಸಿ, ಕಳಂಕದೋರಿದಡೆ ಪಂಚಮಹಾಪಾತಕ. ಪದಾರ್ಥವೆಂದು ಪ್ರಮಾಣಿಸಕ, ಹಿಮ್ಮೆಟ್ಟಿದಡೆ ಭಕ್ತದ್ರೋಹ. ಈ ಎರಡರ ಸಂದಿನಲ್ಲಿ ಸಂದೇಹಕ್ಕೊಳಗಾದವರನೆನಗೆ ತೋರರಿರಯ್ಯಾ, ಕುಂತಳಿಯ ವರಕುರಂಗಲಿಂಗವೆ.