Index   ವಚನ - 17    Search  
 
ಶರಣನೊಳಗಡಗಿರ್ದ ಐಕ್ಯ, ಐಕ್ಯನೊಳಗಡಗಿರ್ದ ಗುರು. ಗುರುವಿನೊಳಗಡಗಿರ್ದ ಲಿಂಗ, ಲಿಂಗದೊಳಗಡಗಿರ್ದ ಜಂಗಮ. ಜಂಗಮದೊಳಗಡಗಿರ್ದ ಗುರು. ನಿತ್ಯಲಿಂಗಾರ್ಚನೆ, ಅನಿತ್ಯಲಿಂಗಾರ್ಚನೆಯೊಳಗಡಗಿರ್ದ ನಿತ್ಯನಿರಾಲಂಬ ಮಹಾ ಆಕಾಶ. ಇಂತೀ ಎಲ್ಲವೂ ಅಡಿಗಿರ್ದವು, ಆ ನಿರಾಲವೆಂಬ ದೇಗುಲದೊಳಗೆ. ಆ ದೇಗುಲವ ಹೊಕ್ಕು, ಬಾಗಿಲವ ದಾಂಟಿ, ಮೇಗಳ ಶಿಖರವ ಹತ್ತಿ ನೋಡಲಾಗಿ, ಬೆಳಗು ನಿಬ್ಬೆಳಗು. ನಿಃಕಲ ನಿರ್ಲೇಪವಾದ ಲಿಂಗೈಕ್ಯನ ಪ್ರಸಾದಕ್ಕೆ ಆನು ಹಾರೈಸಿ ಬಂದಿರ್ದೆ ಕಾಣಾ,ಜಂಗಮಲಿಂಗಪ್ರಭುವೆ.