Index   ವಚನ - 2    Search  
 
ಮರ್ಕಟಜ್ಞಾನದಿಂದ ಲಕ್ಷಿಸುವುದು; ವಿಹಂಗ ಜ್ಞಾನದಿಂದ ಸಂಚರಿಸುವುದು. ಪಿಪೀಲಿಕ ಜ್ಞಾನದಿಂದ ಧ್ಯಾನಿಸುವುದು, ಒಂದೋ? ಮೂರೋ? ಎಂಬುದು ತಿಳಿದು, ಖಾರ ಮಧುರ ಕಹಿ ಇವರೊಳಗೆ ಬೆರೆದ ಸಾರ ಒ೦ದೊ? ಮೂರೊ? ಎಂಬುದ ತಿಳಿದು ದರ್ಪಣದ ಇದಿರಿನಲ್ಲಿ ನಿಂದ ಗಜ ಅಜ ಪಶು ನರ ಮುಂತಾಗಿ ತೋರುತ್ತಿಹ ಬಿಂಬಂ ಮುಕುರ ಒಂದರಲ್ಲಿ ಸಂದಣಿಸುವಂತೆ ನಿಜಾತ್ಮನ ಪಿಂಡಜ್ಞಾನಭೇದ ಬಸವಣ್ಣಪ್ರಿಯ ಕೊಡಲಚೆನ್ನಸಂಗಮದೇವರಲ್ಲಿ ಜ್ಞಾನಪಿಂಡೋದಯ.