•  
  •  
  •  
  •  
Index   ವಚನ - 33    Search  
 
ಅಜಲೋಕದೊಳಗಿಪ್ಪ ಬಹುಪರಿಯ ಕುಸುಮಕ್ಕೆ ಕರಂಗಳು ಬಂದು ಪೀಡಿಸುತ್ತಾ ಬಂಡುಂಬ ತುಂಬಿಯನು ಇಂಬಪ್ಪ ಕುಸುಮವನು ಸಂಭ್ರಮದಿ ನುಂಗಿತಾ ಜ್ಯೋತಿ ಬಂದು ಜ್ಯೋತಿಯನು ಸೂಕ್ಷ್ಮ ಸಿದ್ಧಿಯನು ಹಲವೆನಿಸಿ ರೀತಿಯಾದುದು ದೆಸೆಯ ಪ್ರಬಲಕಾಗಿ ಅಜಾತನ ರೀತಿವಿಡಿದವರೆಲ್ಲಾ ನಿತ್ಯರಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ.
Transliteration Ajalōkadoḷagippa bahupariya kusumakke karaṅgaḷu bandu pīḍisuttā bandumba tumbiyanu imbappa kusumavanu sambhramadi nuṅgitā jyōti bandu jyōtiyanu sūkṣma sid'dhiyanu halavenisi rītiyādudu deseya prabalakāgi ajātana rītiviḍidavarellā nityarayyā kapilasid'dhamallikārjuna.