•  
  •  
  •  
  •  
Index   ವಚನ - 37    Search  
 
ಅಣ್ಣಗಳು ಕೇಳಿರೆ, ಅಣ್ಣಗಳು ಕೇಳಿರೆ, ಲೋಹಿತೇಶ್ವರದೇವರ ಮರೆ ಬಂದು ಒರಸೀತು, ಸುವರ್ಣದ ಕಳಸ ವೆಜ್ಜವಾದೀತು, ಜಪತಾವಡ ಮಣಿ ಹರಿದಾವು, ಗುರುಹಿರಿಯರೆಲ್ಲಾ ಹೆಡೆಗುಡಿಯ ಕಟ್ಟಿಗೊಳಗಾದಾರು ಕಪಿಲೆ ಬಾಣಸಕ್ಕೆ ಬಂದೀತು, ಸೊನ್ನಲಿಗೆಯ ಪುಣ್ಯಕ್ಷೇತ್ರವಳಿದೀತು ಇಂತೀ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನದೇವರು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ.
Transliteration Aṇṇagaḷu kēḷire, aṇṇagaḷu kēḷire, lōhitēśvaradēvara mare bandu orasītu, suvarṇada kaḷasa vejjavādītu, japatāvaḍa maṇi haridāvu, guruhiriyarellā heḍeguḍiya kaṭṭigoḷagādāru kapile bāṇasakke bandītu, sonnaligeya puṇyakṣētravaḷidītu intī enna kapilasid'dhamallikārjunadēvaru illiyū illa, alliyū illa.