ವಚನ - 56     
 
ಅಯ್ಯ ನಿನ್ನ ವಿಕಳತೆಯಿಂದ ಹಲವು ಪರಿಯಲಿ ಭ್ರಮಿತನಾದೆನಯ್ಯಾ. ಅಯ್ಯಾ ಗಿರಿಗಹ್ವರದೊಳಗೆ ಹಲವು ಪರಿಯಲಿ ಅರಸಿ ತೊಳಲಿ ಬಳಲಿದೆನಯ್ಯಾ. ಕಂಡೆ, ಕಂಡೆ, ನೀನಿಪ್ಪ ಠಾವ. ನೀನು ಭಕ್ತಿ ಕಾರಣ ಪರಶಿವಮೂರ್ತಿಯಪ್ಪುದನು ಕಂಡೆ ಕಂಡೆ ನಿನ್ನವರಲ್ಲಿ ಕಪಿಲಸಿದ್ದಮಲ್ಲಿಕಾರ್ಜುನಾ.