ಅಯ್ಯ ಬಂದಾನು ಆನಂದ ಮಂಟಪಕ್ಕೆ,
ಎಚ್ಚತ್ತಿರಿರೋ ದ್ವಾರಕಿಂಕರರು;
ಎಚ್ಚತ್ತಿರಿರೋ ಅವಸರಿಗರು.
ಅಯ್ಯ ಸುತ್ತಿಮುತ್ತಿಗೆಗೊಳಗಾದನಾದಡೆ
ಪಟ್ಟಣ ಸರ್ವಸ್ವವೂ ವಶವಹುದು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನು
ಹಿಡಿಗಟ್ಟಿಗೊಳಗಹನು.
Transliteration Ayya bandānu ānanda maṇṭapakke,
eccattirirō dvārakiṅkararu;
eccattirirō avasarigaru.
Ayya suttimuttige gāyagoṇḍanādaḍe
paṭṭaṇa sarvasvavū vaśavahudu,
kapilasid'dhamallikārjunayyanu
hiḍigaṭṭigoḷagahanu.