ಅಯ್ಯಾ, ನಿಮ್ಮ ಮಹಾತ್ಮೆಯನಾರಿಗೆಯೂ ಉಪಮಿಸಬಾರದು.
ಹಾ ಹಾ, ಅಯ್ಯಾ, ನೀ ಮಹಾಗುರುವು ಕಂಡಯ್ಯಾ.
ನೀ ಮಹಾಮಹಾದೇವನೈ
ಎನ್ನ ಕಪಿಲಸಿದ್ಧಮಲ್ಲೇಶ್ವರ ದೇವರ ದೇವನಯ್ಯಾ.
Transliteration Ayyā, nim'ma mahātmeyanārigeyū upamisabāradu.
Hā hā, ayyā, nī mahāguruvu kaṇḍayya.
Nī mahāmahādēvanai
enna kapilasid'dhamallēśvara dēvara dēvanayyā.