ವಚನ - 107     
 
ಅಯ್ಯಾ, ಹೊಟ್ಟೆ ಬೆನ್ನ ಮಚ್ಚಿದಂತೆ ನಾ ನಿನ್ನ ಮಚ್ಚಿದೆನಯ್ಯಾ. ಅಯ್ಯಾ, ನೀ ಬಾರಯ್ಯಾ, ನಿಮ್ಮ ಬರವ ಹಾರುತ್ತಿರ್ದೆನಯ್ಯಾ. ನಿಮ್ಮ ಬರವ ಹಾರಿ ಹಾರಿ ಕಣ್ಮುಚ್ಚದೆನ್ನ ಮನವಯ್ಯ. ಅಯ್ಯಾ, ನೀ ಬಾರಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.