•  
  •  
  •  
  •  
Index   ವಚನ - 114    Search  
 
ಅರಿಯಬಾರದ ಘನವನರಿದು ಸಾಧಿಸಿ ಗೆದ್ದ ಘನಮಹಿಮ ಶರಣರ ಮುಂದೆ ಎನ್ನ ಪ್ರತಾಪ ನಿಲುಕುವುದೆ? ಅವರಿಪ್ಪರು ಲಿಂಗಪ್ರಭೆಯೊಳಗೆ; ನಾನಿಪ್ಪೆನು ಅಹಂಕಾರ ಪಂಜರದೊಳಗೆ ಎನ್ನ ನೊಸಲ ಕಣ್ಣಿನ ಕಿಚ್ಚುಡುಗಿ ಲಜ್ಜಿತವಾಗಿ ಮರಳಿ ಬಂದೆನ್ನ ಸುತ್ತಿ ಮುತ್ತಿತ್ತು. ನಾನು ಶರಣೆಂಬ ಗುರುವಚನವಿದಿರೆದ್ದು ಕೊಲುವಡೆ, ಕಪಿಲಸಿದ್ಧಮಲ್ಲಿನಾಥನೊಳಗೆ ಅಳಿವೆನಲ್ಲದೆ ಉಳಿವನಲ್ಲ.
Transliteration Ariyabārada ghanavanaridu sādhisi gedda ghanamahima śaraṇara munde enna pratāpa nilukuvudu? Avaripparu liṅgaprabheyoḷage; nānippenu ahaṅkāra pan̄jaradoḷage enna nosala kaṇṇina kiccuḍugi lajjitavāgi maraḷi bandenna sutti mittu. Nānu śaraṇemba guruvacanavidireddu koluvaḍe, kapilasid'dhamallināthanoḷage aḷivenallade uḷivanalla.