ಆಜ್ಞಾಸಿದ್ಧನನರ್ಚಿಸುವ ಆನಂದಮಯ
ಶರಣರ ಧ್ಯಾನ ಮೌನ ಸಮಾಧಿಗಳ[ದ್ಹೆಂ]ಗೆಂದೊಡೆ:
ಪ್ರಸಾದವ ಬಯಸಿ ಪರವನರಿಯದಿಹುದೆ ಧ್ಯಾನ;
ಶಿವನಲ್ಲದೆ ಅತಃಪರವಿಲ್ಲೆಂದು
ಅನ್ಯರ ಕೂಡೆ ನುಡಿಯದಿಪ್ಪುದೆ ಮೌನ;
ವ್ರತವಾರರಲ್ಲಿ ತದ್ಗತವಾಗಿಪ್ಪುದೀಗ ಸಮಾಧಿ,
ಇಂತಪ್ಪುದೀಗ ಶಿವಯೋಗ.
ಇಂತಪ್ಪವರ ತೋರು, ನಿನ್ನರ್ಚನೆಯನೊಲ್ಲೆ;
ಅವರ ಗಡಣ ಸಂಗಮಾತ್ರದಲ್ಲಿ ನಿನ್ನ ಪದವಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ājñāsid'dhananarcisuva ānandamaya
śaraṇara dhyāna mauna samādhigaḷa[d'heṁ]gendoḍe:
Prasādava bayasi paravanariyadihude dhyāna;
śivanallade ataḥparavillendu
an'yara kūḍe nuḍiyadippude mauna;
vratavāradalli tadgatavāgippudīga samādhi,
intappudīga śivayōga.
Intappavara tōru, ninnarcaneyanolle;
avara gaḍaṇa saṅgamātradalli ninna padavayya
kapilasid'dhamallikārjunā.