ವಚನ - 176     
 
ಆನರಿಯೆನಯ್ಯಾ, ಪಶು ನಂಬುವಂತೆ ನಂಬುವೆ. ನೀನು ಕೊಂದಲ್ಲಿ ಸಾವೆ, ಆನರಿಯೆನಯ್ಯಾ, ನೀನು ಕಾಯ್ದಲ್ಲಿ ಬದುಕುವೆ, ಆನರಿಯೆನಯ್ಯಾ. ಪಶು ನಂಬುವಂತೆ ನಂಬುವೆ, ಶಿಶು ಬೇಡುವಂತೆ ಬೇಡುವೆ. ಅರಿವಿಲ್ಲದವನಲ್ಲಿ ಅರಿವ ನೀನರಸುವರೆ? ನೀನರಿಯೆಂದಡರಿವೆ, ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ.