•  
  •  
  •  
  •  
Index   ವಚನ - 181    Search  
 
ಆನೆಂಬ ಕುಸುಮಕ್ಕೆ ತಾನೆಂಬ ಮಧುಕರನು ಭಾನುವಿನ ಉದಯದಲ್ಲಿ ವಿಕಸವಾಗಿ ಸೋಮವೀಥಿಯ ಬೆಳಗಿ ಹೇಮಶೈಲದ ಉದಯ ಕಾಮದಂಡಿಯ ಹಿಡಿದು ಮನೆಮನೆಗಳ ಸೀಮೆಯನು ಸಂಬಂಧ ಗ್ರಾಮವನು ಮನೆಗಳನು ಆನಳಿದು ಕಂಡೆನೈ ಹವಣು ಹಲವ. ನಿಸ್ಸೀಮನಾ ಕಪಿಲಸಿದ್ಧ ಮಲ್ಲಿಕಾರ್ಜುನನ ಸೀಮೆಯನು ಕಾಬವರು ಹಲಬರಿಲ್ಲ.
Transliteration Ānemba kusumakke tānemba madhukaranu bhānuvina udayadalli vikāsavāgi sōmavīthiya beḷagi hēmaśailada udaya kāmadaṇḍiya hiḍidu manemanegaḷa sīmeyanu sambandha grāmavanu manegaḷanu ānaḷidu kaṇḍenai havanu halava. Nis'sīmanā kapilasid'dha mallikārjuna sīmeyanu kābavaru halabarilla.