ವಚನ - 185     
 
ಆನೆ ಮದಸೊಕ್ಕಿ ಮಾವತಿಗನನರಿಯದು ಕೇಳಿರಣ್ಣಾ. ಮದವುಡುಗಿ ಬೆದರಿ ಇನ್ನೇವೆನಿನ್ನೇವೆನೆಂಬುದಯ್ಯಾ. ಇದಕಂಕುಶವ ಹಿಡಿದಿದ್ದನಯ್ಯಾ, ಎನ್ನ ಕಪಿಲಸಿದ್ಧಮಲ್ಲಿನಾಥ ಹಾ! ಅಯ್ಯಾ!