•  
  •  
  •  
  •  
Index   ವಚನ - 187    Search  
 
ಆಪ್ಯಾಯನವರತು ಪರಿಣಾಮ ನೆಲೆಗೊಂಡು ಅರಿವರತು ಮರಹು ನಷ್ಟವಾದವರ ಕುರುಹುಗೆಟ್ಟು ಪದವ ಮೀರಿ ಸೀಮೆಯ ದಾಂಟಿದವರ ತಂದು ತೋರಾ, ಅಯ್ಯ ನಿಮ್ಮ ಧರ್ಮ. ಎನ್ನ ಭವದ ಬೇರ ಹರಿವೊಡೆ ತಂದು ತೋರಾ, ಇವರ ತಂದು ತೋರು. ಎನ್ನ ಕಪಿಲಸಿದ್ಧಮಲ್ಲಿಕಾರ್ಜುನನ ಹತ್ತೆ ಸಾರಿಸಾ ಬಸವಣ್ಣಾ.
Transliteration Āpyāyanavaratu pariṇāma nelegoṇḍu arivaratu marahu naṣṭavādavara kuruhugeṭṭu padava mīri sīmeya dāṇṭidavara tandu tōrā, ayya nim'ma dharma. Enna bhavada bēra harivoḍe tandu tōra, ivara tandu tōru. Enna kapilasid'dhamallikārjuna hatte sārisā basavaṇṇā.