•  
  •  
  •  
  •  
Index   ವಚನ - 213    Search  
 
ಆವನಾಗಿ ಒಬ್ಬನು ಅವಿಚಾರದಿಂದ ಶಿರಸ್ಸಿನ ಮೇಲೆ ಕೈದುವಿಕ್ಕುಗೆಯ, ಮೇಣು ಗಂಧಾಕ್ಷತೆ ಪುಷ್ಪದಲ್ಲಿ ಪೂಜೆ ಮಾಡುಗೆಯ; ಪೂಜೆ ಮಾಡಿದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Avanāgi obbanu avicāradinda śiras'sina mēle kaiduvikkugeya, mēṇu gandhākṣate puṣpadalli pūje māḍugeya; pūje māḍidaḍe mana vindavāgadondeyandadallippantappa nim'madondu samatāguṇa ennanendu bandu poddippudu hēḷā kapilasid'dhamallikārjunā.