ವಚನ - 215     
 
ಆವನಾಗಿ ಒಬ್ಬನು ನಾಸ್ತಿಕವನಾಡಿ ನಗುತಿಪ್ಪುದನು ತಾ ಕೇಳಿ, ಮತ್ತಾವನಾಗಿ ಬಂದು ಪೇಳ್ದಡೆ, ಮನ ವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.