ಇಂತು ನಿನ್ನಯ ಭವದ ಚಿಂತೆಗೆಟ್ಟಿತು
ಬ್ರಹ್ಮ ನಿಶ್ಚಿಂತನಾದೆನೈ,
ಸಕಲದಲ್ಲಿ ವಸ್ತು ಹಲವನು ಜರಿದು
ತತ್ತ್ವ ಮೂವತ್ತಾರ ವ್ಯರ್ಥವೆಂದೇ ಕಳೆದು,
ಸುಚಿತ್ತದಿಂದಾ ಮತ್ತೆ
ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ತತ್ತ್ವ ತುರೀಯದೊಳಗೆ ಲೀಯವಾದೆ.
Transliteration Intu ninnaya bhavada cintegeṭṭitu
brahma niścintanādenai,
sakaladalli vastu halavanu jaridu
tattva mūvattāra vyarthavendē kaḷedu,
sucittadinda matte
kapilasid'dhamallikārjunanemba
tattva turīyadoḷage līyavāde.