•  
  •  
  •  
  •  
Index   ವಚನ - 246    Search  
 
ಇನ್ನಾವ ಹಿರಿಯರೇನಾದಡೇನಯ್ಯಾ, ಇನ್ನಾವ ಸಮಯವಾದಡೇನಯ್ಯಾ, ನೀ ಮಾಡಿದಂತೆ ಆಗದವರಾರಯ್ಯಾ, ನೀನಿರಿಸಿದಂತೆ ಇರದವರಾರಯ್ಯ, ನಿನ್ನಿಚ್ಛಾಮಾತ್ರದಲ್ಲಿ ಜಗವು ಅಪ್ಪುದಡಗುವುದಯ್ಯಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Innāva hiriyanādaḍēnayyā, innava samayavādaḍēnayyā, nī māḍidante āgadavarayya, nīnirisidante iradavarayya, ninnicchāmātradalli jagavu appudaḍaguvudayya, enna kapilasid'dhamallikārjunayya.