•  
  •  
  •  
  •  
Index   ವಚನ - 248    Search  
 
ಇಬ್ಬಟ್ಟೆಯಲ್ಲಿ ಮನೆಯ ಮಾಡಿಕೊಂಡಿಪ್ಪನಲ್ಲ; ನಿನ್ನ ಕಂಗಳ ಮುಂದಿಂದಗಲಿದಡೆ ಎಂತು ಜೀವಿಸುವೆನಯ್ಯಾ? ಎಂತು ಬದುಕುವೆನಯ್ಯಾ? ಎನ್ನಳಲಬಳಲ ಕಂಡು ಕರುಣದಿಂದ ನೋಡಿ ನಿನ್ನಳಲೇನುಸುರುಸುರೆಂದು ಕಣ್ಣೀರ ತೊಡೆದೊಡಗೂಡಾ, ಕಪಿಲಸಿದ್ಧಮಲ್ಲಿನಾಥಾ.
Transliteration Ibbaṭṭeyalli maneya māḍikoṇḍippanalla; ninna kaṅgaḷa mundindagalidaḍe entu jīvisuvenayyā? Entu badukuvenayyā? Ennaḷalabaḷala kaṇḍu karuṇadinda nōḍi ninnaḷalēnusurusurendu kaṇṇīra toḍedoḍagūḍā, kapilasid'dhamallinātha.