•  
  •  
  •  
  •  
Index   ವಚನ - 266    Search  
 
ಉತ್ತರಕೋಣೆಯ ಉತ್ತರೋತ್ತರ ವಾಕ್ಯವ ಕೇಳಿ ಧನ್ಯನಾದೆನಯ್ಯಾ. ಉತ್ತರಕೋಣೆಯ ನಿಮಿತ್ತ ಪರಮಗುರುವಿನ ದೂಷಣೆಯ ಕೇಳಿ ಪಾಪಿಯಾದೆನಯ್ಯಾ. ಇದುಕಾರಣ, ಶರಣರ ದೂಷಣೆಯಿಂದ ಶರಣರ ಮನಕ್ಕೆ ಭೂಷಣವೆ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Uttarakōṇeya uttarōttara vākyava kēḷi dhan'yanādenayyā. Uttarakōṇeya nimitta paramaguruvina dūṣaṇeya kēḷi pāpiyādenayyā. Idukāraṇa, śaraṇara dūṣaṇeyinda śaraṇara manakke bhūṣaṇave? Kapilasid'dhamallikārjunā.